ಮಾಂಜ ದಾರಕ್ಕೆ ಹುಬ್ಬಳ್ಳಿಯ ಗ್ರಹಿಣಿ ಬಲಿ: ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯ ಕುತ್ತಿಗೆ ಕಟ್

ಹುಬ್ಬಳ್ಳಿಯಲ್ಲಿ ಗಾಳಿಪಟದ ಮಾಂಜಾದಾರಕ್ಕೆ ಮತ್ತೊಬ್ಬ ಗ್ರಹಿಣಿ ಬಲಿಯಾಗಿದ್ದಾರೆ ಸ್ಕೂಟಿಯಲ್ಲಿ ಹೋಗುತ್ತಿದ್ದ ಲ್ಯಾಬ್ ಟೆಕ್ನಿಷಿಯನ್ ಕುತ್ತಿಗೆಗೆ ಮಾಂಜಾ ಧಾರಕ್ಕೆ ಸಿಲುಕಿಕೊಂಡು, ಅತಿಯಾದ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಹುಬ್ಬಳ್ಳಿಯ ಶಿವಶಂಕರ ಕಾಲನಿ ಬಳಿ ನಡೆದಿದೆ

ಹುಬ್ಬಳ್ಳಿಯಲ್ಲಿ ಲ್ಯಾಪ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ವಿದ್ಯಾ ಮಂಜುನಾಥ್ ಗೌಡರ್. 38. ಮೃತಪಟ್ಟ ದುರ್ದೈವಿ ಮಹಿಳೆ ಆಗಿದ್ದಾರೆ

ವಿದ್ಯಾ ಮಧ್ಯಾಹ್ನ ಊಟ ಮುಗಿಸಿಕೊಂಡು ಲ್ಯಾಬ್ ಗೆ ಸ್ಕೂಟಿ  ತೆಗೆದುಕೊಂಡು ಹೋಗುತ್ತಿರುವಾಗ ಶಿವಶಂಕರ ಕಾಲೋನಿ ಪಾಸ್ ಆಗುತ್ತಿರುವಾಗ ವಿದ್ಯಾ ಅವರ ಕುತ್ತಿಗೆಗೆ ಮಂಜದಾರ ಸಿಲುಕಿ, ಅವರು ತೀವ್ರ ರಕ್ತಸ್ರಾವದಿಂದ ಕುಸಿದು ಬೀಳ್ತಾರೆ . ಸ್ಥಳೀಯರ ನೆರವಿನಿಂದ ಇವರನ್ನ ಸ್ಕೀಮ್ಸ್ ಆಸ್ಪತ್ರೆಗೆ ದಾಖಲಿಸುತ್ತಾದರೂ ಚಿಕಿತ್ಸೆ ಪಲಿಕಾರಿಯಾಗದೆ ಇವರು ಸಾವನ್ನಪ್ಪಿದ್ದಾರೆ

ಇಷ್ಟೆಲ್ಲ ಘಟನೆಯ ನಂತರ ಹುಬ್ಬಳ್ಳಿ ಧಾರವಾಡ ಪೋಲೀಸರು ಮಂಜದಾರ ಮಾರುವುದು ಅಥವಾ ಗಾಳಿಪಟಕ್ಕೆ ಸೇರಿಸಿ ಹಾರಿಸುವುದು ಯಾರೇ ಆದರೂ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇವೆ ಎಂದು ಮತ್ತೊಮ್ಮೆ ಸಾರ್ವಜನಿಕರಲ್ಲಿ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ