ಬಿಹಾರ: ಚಂಪಾರನ್,ದಸರಾ ಹಬ್ಬದ ಜಾತ್ರೆಗೆ ತೆರಳಿ ವಾಪಸ್ ಮನೆಗೆ ತೆರಳುತ್ತಿದ್ದ ನವದಂಪತಿಗಳ ಮೇಲೆ ಎಂಟು ಕಾಮುಕರು ಅಟ್ಟಹಾಸ ಮೆರೆದು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಬಿಹಾರದ ಪೂರ್ವ ಚಂಪರಾಣ ಜಿಲ್ಲೆಯಲ್ಲಿ ವರದಿಯಾಗಿದೆ
ನವದಂಪತಿಗಳು ದಸರಾ ಜಾತ್ರೆಯನ್ನ ಮುಗಿಸಿಕೊಂಡು ಮನೆಗೆ ನಡೆದುಕೊಂಡು ತೆರಳುತ್ತಿದ್ದಾಗ ಎಂಟು ಕಾಮುಕರು ಪತಿಯ ಮೇಲೆ ಹಲ್ಲಿಯನ್ನು ನಡೆಸಿ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ, ಈ ಕೃತ್ಯದ ಬಳಿಕ ನವದಂಪತಿಗಳ ಹತ್ತಿರ ಇದ್ದ ಮೊಬೈಲ್ ಹಣ ಮತ್ತು ಒಡವೆಗಳನ್ನ ಈ ಎಂಟು ಖದೀಮರು ದೋಚಿ ಪರಾರಿಯಾಗಿದ್ದರು.
ಈ ಘಟನೆಯನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣ ಕಾರ್ಯ ಪ್ರವತ್ತರಾಗಿ ಎಲ್ಲಾ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ
ಸಂತ್ರಸ್ತ ಮಹಿಳೆಯನ್ನ ಮೆಡಿಕಲ್ ಚೆಕಪ್ ಗೆ ಒಳಪಡಿಸಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ. ಘಟನೆಯಿಂದ ತೀವ್ರ ಆಘಾತ ಮತ್ತು ಮನನೊಂದ ದಂಪತಿ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ತೀವ್ರಗೊಳಿಸಿದ್ದಾರೆ